Sri Srinivasa Kalyana – ಶ್ರೀ ಶ್ರೀನಿವಾಸ ಕಲ್ಯಾಣ (1974/೧೯೭೪) : Jaya Jaya Jagadisha – ಜಯ ಜಯ ಜಗದೀಶ


ಚಿತ್ರ: ಶ್ರೀ ಶ್ರೀನಿವಾಸ ಕಲ್ಯಾಣ (೧೯೭೪/1974)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಿ.

ಪ್ರಭುಜೀ.. ಬಾಲಾಜಿ..
ತಿರುಪತಿ ವಾಸ, ನಮೋ ಶ್ರೀನಿವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಅಂಜನಾದ್ರಿ ವಾಸ, ಆನಂದಾದ್ರಿ ವಾಸ
ಪೊರೆಯೋ ಪಾಪ ವಿನಾಶ, ಶ್ರೀಶ
ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ಶೇಷಾದ್ರಿ ವಾಸ, ಗೋವಿಂದಾ ಗೋವಿಂದ
ಗರುಡಾದ್ರಿ ವಾಸ, ಗೋವಿಂದಾ ಗೋವಿಂದ
ಬಾಲಾಜಿ, ಗೋವಿಂದಾ ಗೋವಿಂದ, ಬಾಲಾಜಿ

ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ತಂದೆಯು ನೀನೆ, ತಾಯಿಯು ನೀನೆ
ನಂಬಿದ ಭಕುತರ ಬಂಧುವು ನೀನೆ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ಸುಂದರ ನಯನ ಚಂದಿರ ವದನ
ಸಲಹೋ ವೆಂಕಟರಮಣ
ತೋರೋ ಪಾವನ ಚರಣ ಸ್ವಾಮೀ

ಜಯ ಜಯ ಜಗದೀಶ ಜಯ ಗೋವಿಂದ
ಜಪಿಸಲು ನಿನ್ನ ನಾಮ ಪರಮಾನಂದ
ನೀಲಾದ್ರಿ ವಾಸ, ಗೋವಿಂದಾ ಗೋವಿಂದ
ವೆಂಕಟಾದ್ರಿ ವಾಸ, ಗೋವಿಂದಾ ಗೋವಿಂದ
ಬಾಲಾಜಿ, ಗೋವಿಂದಾ ಗೋವಿಂದ, ಬಾಲಾಜಿ

ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ದಾಸನ ಮೇಲೆ ಏನೀ ಕೋಪ
ಕರಗದೆ ಇನ್ನೂ ನಾ ಮಾಡಿದ ಪಾಪ
ನಿನ್ನನು ಕಾಣದ ಕಣ್ಣುಗಳೇಕೆ
ಪೂಜಿಸದ ಕೈಗಳೇಕೆ
ಶೋಕದ ಬಾಳಿನ್ನೇಕೆ
ವ್ಯರ್ಥದ ಜನುಮವಿದೇಕೆ, ಸ್ವಾಮೀ
ಸೇರುವೆ ನಾನಿನ್ನ ಪಾದಾರವಿಂದ
ಕರೆದುಕೊ ಕರುಣಾಳು ಹೇ ಗೋವಿಂದ
ಬಾಲಾಜಿ, ಬಾಲಾಜಿ, ಪ್ರಭೋ…

sri srinivasa kalyana kannada film movie lyrics ಜಯ ಜಯ ಜಗದೀಶ jaya jaya jagadisha spb chi udayashankar sandalwood chandanavana gandhadagudi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s