Tony – ಟೋನಿ (1982/೧೯೮೨) : Neeliya Baaninda – ನೀಲಿಯ ಬಾನಿಂದ


ಚಿತ್ರ: ಟೋನಿ (೧೯೮೨/1982)
ಸಾಹಿತ್ಯ: ದೊಡ್ಡರಂಗೇ ಗೌಡ
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ರವಿ, ನಾಗೇಂದ್ರ

ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ

ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ

ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
ಭೂಮಿಮ್ಯಾಲೆ ಹುಟ್ಟಿದ್ ಮ್ಯಾಗೆ
ಏರು ಪೇರು ಇರುತೈತೆ
ಬಾಳ ಪ್ರೀತಿ ಆಟದಾಗೆ
ಸೋಲು ಗೆಲುವು ಬರುತೈತೆ
ಬಾಳ ಪ್ರೀತಿ ಆಟದಾಗೆ
ಸೋಲು ಗೆಲುವು ಬರುತೈತೆ
ಎಂಥ ಕಾಲ ಬಂದ್ರು ಕೂಡ
ಎಲ್ಲ ತಾಪ ಮರೆಸಿ ತಾನು
ಶಾಂತಿಯ ಕೊಡುವನು ಯಾರಮ್ಮ, ಚಂದಮಾಮ
ಚಂದಾಮಾಮ ಆವನೆ ಚಂದಾಮಾಮ

ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಅಹಾ ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಒಹೊ ತಂಪನು ತಂದನು ಚಂದಮಾಮ
ಚಂದಾಮಾಮ ಆಹಾ ಚಂದಾಮಾಮ
ಚಂದಾಮಾಮ ಓಹೊ ಚಂದಾಮಾಮ

ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ
ಸಪ್ಪೆ ಮೋರೆ ಹಾಕೊಂಡಿದ್ರೆ
ಏನು ತಾನೆ ಸಿಗುತೈತೆ
ನಾವು ನೀವು ನಗುತ ಇದ್ರೆ
ಲೋಕ ತಾನು ನಗುತೈತೆ
ನಾವು ನೀವು ನಗುತ ಇದ್ರೆ
ಲೋಕ ತಾನು ನಗುತೈತೆ
ಬವಣೆ ಬಂದ್ರು ಸಹಿಸ್ಕೊಂಡೆ
ಕಷ್ಟಾನ್ನೊ ಕತ್ಲೆ ಕಳ್ದು
ಕಾಂತಿಯ ಕೊಡುವನು ಯಾರಮ್ಮ, ಚಂದಮಾಮ
ಚಂದಾಮಾಮ ಆವನೆ ಚಂದಾಮಾಮ

ನೀಲಿಯ ಬಾನಿಂದ ತಾರೆಯ ಊರಿಂದ
ತೇಲೂತ ಬಂದನು ಚಂದಮಾಮ
ಹಾಲಿನ ಕಡಲಿಂದ ಮೋಡಾದ ಮಡಿಲಿಂದ
ತಂಪನು ತಂದನು ಚಂದಮಾಮ
ಚಂದಾಮಾಮ ಆಹ ಚಂದಾಮಾಮ
ಚಂದಾಮಾಮ ಒಹೊ ಚಂದಾಮಾಮ

tony rajan-nagendra doddarange gowda eavi nagendra neeliya baaninda kannada film movie lyrics sandalwood chandanavana gandhadagudi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s