Makkale Manege Manikya – ಮಕ್ಕಳೇ ಮನೆಗೆ ಮಾಣಿಕ್ಯ (1969/೧೯೬೯) : Aaseyu Munde Munde – ಆಸೆಯು ಮುಂದೆ ಮುಂದೆ


ಚಿತ್ರ: ಮಕ್ಕಳೇ ಮನೆಗೆ ಮಾಣಿಕ್ಯ (೧೯೬೯/1969)
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್

ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ
ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ
ಆಸೆಯೆ ಇಲ್ಲದ ಹೃದಯಗಳಿಲ್ಲ
ಆಸೆಯು ಇಲ್ಲದೆ ಜಗವೇ ಇಲ್ಲ
ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ

ಎಲ್ಲರ ಮನದಲಿ ಆಸೆಯ ಜಾತ್ರೆ
ಆಸೆಯು ಎಂದಿಗು ತುಂಬದ ಪಾತ್ರೆ
ಶಕ್ತಿಗೆ ಮೀರಿದ ಸಾಹಸದೆಡೆಗೆ
ಹಸುಳೆಗಳನ್ನು ದೂಡುವುದು
ನಗುತ ಆಡುವ ವಯಸಿನಲಿ
ಎನಿತೋ ಚಿಂತೆಯ ನೀಡುವುದು

ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ

ಆಸೆಯ ಜೊತೆಯಲಿ ಹೆಣೆದಿರೆ ಬಾಳು
ಅದಕೆ ಜೀವನದಲಿ ಈ ಗೋಳು
ಕಷ್ಟದಿ ತುಂಬಿರೆ ಆಸೆಯ ಜಾಡು
ಅದರಲಿ ನಡೆಯುತ ಪಡುವರು ಪಾಡು
ಮೃಗ ಜಲದಂತೆ ಕಾಣಲು ಹತ್ತಿರ
ಹಿಡಿಯಲು ನಡೆದರೆ ಅತಿ ದೂರ

ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ
ಆಸೆಯೆ ಇಲ್ಲದ ಹೃದಯಗಳಿಲ್ಲ
ಆಸೆಯು ಇಲ್ಲದೆ ಜಗವೇ ಇಲ್ಲ
ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ
ಆಸೆಯು ಮುಂದೆ ಮುಂದೆ
ಎಲ್ಲರು ಅದರ ಹಿಂದೆ

makkale manege manikya vijaya bhaskar geethapriya pb srinivas aaseyu munde mundhe kannada film movie lyrics sandalwood chandanavana gandhadagudi
Advertisements