Suvarna Bhoomi – ಸುವರ್ಣ ಭೂಮಿ (1969/೧೯೬೯) : Kaanada Devaru Oorige Nooru – ಕಾಣದ ದೇವರು ಊರಿಗೆ ನೂರು


ಚಿತ್ರ: ಸುವರ್ಣ ಭೂಮಿ (೧೯೬೯/1969)
ಸಾಹಿತ್ಯ: ಕು.ರಾ.ಸೀತಾರಾಮ ಶಾಸ್ತ್ರಿ
ಸಂಗೀತ: ವಿಜಯ ಭಾಸ್ಕರ್
ಹಾಡಿದವರು: ಎಸ್.ಜಾನಕಿ, ಬಿ.ಕೆ.ಸುಮಿತ್ರ

ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು

ಹೇಳಲು ಬಾರದ ಹಸುಳೆಯ ಆಸೆ
ಊಹಿಸಿ ತರುವಳು ಹಾಲಿನ ಶೀಶೆ
ಅಮ್ಮ ಎನ್ನುತ ಅಪ್ಪಿದ ಕೂಡಲೆ
ಹಿಗ್ಗುತ ಸುರಿವಳು ಮುತ್ತಿನ ಸುರಿಮಳೆ
ಬೇಡಿದುದೆಲ್ಲ ನೀಡಲು ಬಲ್ಲ
ಬೇಡಿದುದೆಲ್ಲ ನೀಡಲು ಬಲ್ಲ
ತಾಯಿಗಿಂತ ದೇವರೆ ಇಲ್ಲ

ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು

ಆರಿದ ಬಾಯಿಗೆ ಹೀರುವ ಹಾಲು
ಸಂಜೆಯ ಜೋಲಿಗೆ ಜೋಗುಳ ಹಾಡು
ಓದುವ ಮಗುವಿಗೆ ಶ್ರೀ ಓಂ ನಾಮ
ಹಾಡುವ ಹೈದಗೆ ದೇವರ ನಾಮ
ಕೋರಿದ ವರವ ತೀರಿಸಿ ಬಿಡುವ
ಕೋರಿದ ವರವ ತೀರಿಸಿ ಬಿಡುವ
ತಾಯಿಗಿಂತ ದೇವರೆ ಇಲ್ಲ

ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು
ಕಾಣದ ದೇವರು, ಊರಿಗೆ ನೂರು, ಹುಡುಕುವರಾರು
ಕಾಣುವ ತಾಯೇ ಪರಮಗುರು

ಕಾಣದ ದೇವರು ಊರಿಗೆ ನೂರು suvarna bhoomi vijaya bhaskar ku ra seetharama shastry s janaki sumithra kaanada devaru oorige nooru kannada film movie lyrics sandalwood chandanavana gandhadagudi
Advertisements