Geetha – ಗೀತಾ (1981/೧೯೮೧) : Santhoshakke Haadu Santhoshakke – ಸಂತೋಷಕ್ಕೆ ಹಾಡು ಸಂತೋಷಕ್ಕೆ


ಚಿತ್ರ: ಗೀತಾ (೧೯೮೧/1981)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಇಳಯರಾಜ
ಹಾಡಿದವರು: ಎಸ್.ಪಿ.ಬಿ.

ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು, ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ

ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಲತೆಯ ಮೊಗ್ಗು ಅರಳುವಂತೆ
ದುಂಬಿಯನ್ನು ಕರೆಯುವಂತೆ
ಬಾನು ಬಾಗಿ ಕೇಳುವಂತೆ
ನಾದ ಗಂಗೆ ಹರಿಯುವಂತೆ
ಕಲ್ಲು ಕೂಡ ಕರಗುವಂತೆ

ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು, ರಾಗಕ್ಕೆ ನಲಿದು, ನನ್ನಂತೇ, ಹೇ
ಸಂತೋಷಕ್ಕೆ, ಹಾಡು ಸಂತೋಷಕ್ಕೆ

ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಹಿರಿಯರೇನು ಕಿರಿಯರೇನು
ಹರುಷ ಪಡಲು ಭೇದವೇನು
ಎಲ್ಲ ಸೇರಿ ಹಾಡಿದಾಗ
ಸುರಿವ ಮಳೆಯ, ಹನಿಯು ಜೇನು
ಸ್ವರ್ಗ ಕಂಡು ನಾಚದೇನೂ

ಸಂತೋಷಕ್ಕೆ, ಹಾಡು ಸಂತೋಷಕ್ಕೆ
ಕುಣಿದು, ತಾಳಕ್ಕೆ ಕುಣಿದು
ನಲಿದು, ರಾಗಕ್ಕೆ ನಲಿದು, ನನ್ನಂತೇ, ಹೇ

geetha ilayaraja chi udayashankar spb santhoshakke haadu santhoshakke kannada film movie lyrics sandalwood chandanavana gandhadagudi