Shabarimale Swamy Ayyappa – ಶಬರಿಮಲೆ ಸ್ವಾಮಿ ಅಯ್ಯಪ್ಪ (1990/೧೯೯೦) : Swamy Ayyappa – ಸ್ವಾಮಿ ಅಯ್ಯಪ್ಪ

Shabarimale Swamy Ayyappa (1990) Lyrics Main

ಚಿತ್ರ: ಶಬರಿಮಲೆ ಸ್ವಾಮಿ ಅಯ್ಯಪ್ಪ (೧೯೯೦/1990)
ಸಂಗೀತ: ಕೆ.ವಿ.ಮಹದೇವನ್
ಹಾಡಿದವರು: ಕೆ.ಜೆ.ಯೇಸುದಾಸ್

ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ

ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ
ಏಕೆ ಇನ್ನು ದೇವ ಕರುಣೆ ತೋರದಿರುವೆ
ಏಕೆ ಇನ್ನು ದೇವ ಕರುಣೆ ತೋರದಿರುವೆ
ಬೆಳಕಿನೆಡೆಗೆ ನನ್ನ ಬೇಗ ನೆಡೆಸು ನನ್ನ ಪ್ರಭುವೆ
ಬೆಳಕಿನೆಡೆಗೆ ನನ್ನ ಬೇಗ ನೆಡೆಸು ನನ್ನ ಪ್ರಭುವೆ

ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ

ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಮುಕ್ತಿಗಾಗಿ ತಂದೆ ಕಯ್ಯಚಾಚೆನಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ
ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ

ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ

ಕಂಗಳಲ್ಲಿ ನಿನ್ನ ಚರಣ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಂಗಳಲ್ಲಿ ನಿನ್ನ ಚರಣ ತುಂಬಿಕೊಳಲಿ
ಮನಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನ ಕೀರ್ತಿ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನ ನಾಮ ತುಂಬಿಕೊಳಲಿ

ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ಸ್ವಾಮಿ ಅಯ್ಯಪ್ಪ ಸ್ವಾಮೀ ಅಯ್ಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ
ನೀನೇ ಗತಿಯಪ್ಪ ನನಗೆ ನೀನೇ ಗತಿಯಪ್ಪ

Shabarimale Swamy Ayyappa K V Mahadevan k j Yesudas kannada film movie lyrics sandalwood chandanavana gandhadagudi

Shabarimale Swamy Ayyappa (1990) Lyrics Main

« Older entries